Friday, October 01, 2010

Posted by ಬಡಗಿ | 1 comments

ಸೆಕ್ಸಿ "ಸೂರ್ಯ"

ಕ್ಯಾಬು ಹತ್ತಿ ಕುಳಿತ ನಮ್ಮ ಸೂರ್ಯನು
ಬೆಲ್ಟು ಹಾಕಿಕೊಂಡು ನಿದ್ರೆ ಮಾಡುತ್ತಿದ್ದನು

ಹಂಪಿನಲ್ಲಿ ಮೇಲೆ ಎಗರಿ ಬೀಳುತ್ತಿತ್ತು ಬಂಡಿಯು
ತೂಕಡಿಸಿ ಸೀಟಿಗೆ ಹೊಡೆಯುತಿತ್ತು ಅವನ ಮಂಡೆಯು

ಸಿಗ್ನಲಲ್ಲಿ ಬಂದು ನಿಂತಿತು ಕ್ಯಾಬು ಕಸದ ಲಾರಿಯ ಹಿಂಬದಿ
ಕಸದ ನಾತ ಮೂಗು ಬಡಿದು ಎದ್ದ ಸೂರ್ಯ ಮುಂಬದಿ

ಎದ್ದ ಒಡನೆ ಯಾರೋ ಸೂರ್ಯನನ್ನು "ಮಾಮ, ಮಾಮ" ಎಂದು ಕರೆದರು
ಕ್ಯಾಬಿನಲ್ಲಿದ್ದವರು ನಪುಂಸಕರನ್ನು ಕಂಡು ಬಾಯಿಗೆ ಬೀಗ ಜಡಿದರು

ಅರೆ ನಿದ್ರೆಯಿಂದೆದ್ದ ಸೂರ್ಯನ ಕಣ್ಗಳು ಕಂಡವು ಕೆಂಪಗೆ
ಕನಸಿನಲ್ಲಿ ಬಂದ ರಂಭೆ ಎದುರು ನಿಂತಂತಾಗಿ ಆಯ್ತು ಕಣ್ಣು ತಂಪಗೆ

ಬಿಟ್ಟ ಕಣ್ಣು ಬಿಟ್ಹಾಗೆ ನೋಡುತ್ತಿದ್ದ ಸೂರ್ಯ ನಪುಂಸಕರನು
ಸಿಟ್ಟಿನಿಂದ ನಪುಂಸಕ "ಸೆಕ್ಸಿ ಐಸ್" ಎಂದು ಜಾರಿಕೊಂಡನು

ರಂಭೆ ಕೊಟ್ಟ ಬಿರುದಿಗೆ ನಮ್ಮ ಸೂರ್ಯ "ಥ್ರಿಲ್" ಆದನು
ಅಂದಿನಿಂದ ನಮ್ಮ ಸೂರ್ಯ "ಸೆಕ್ಸಿ ಸೂರ್ಯ"ನಾದನು.

೨೦೧೦-೦೯-೩೦

1 comments:

Swastik said...

Hi Kishore...Tumba oleya yochaney maadi deera. Nim blog moolaka Kannda da saviyannu yellaru saviyali... Edha ke nanna dondu salahey.. Ee blog naali Kannada sumudura haadu gaalannu load maadalu saadya vaadalli kannada da saviyannu saviyuva jotey ge, kannada da empannu keli aanandisa bahudu..