Thursday, November 25, 2010

Posted by ಬಡಗಿ | 0 comments

ನಿದ್ದೆ - ವಿದ್ಯೆ

ಕಪ್ಪನೆ ರಾತ್ರಿ ಮಲಗಿತ್ತು
ನಿದ್ದೆಯ ಜೋಂಪು ಹತ್ತಿತ್ತು

ಎಲ್ಲರು ನಿದ್ದೆಯ ಮಾಡಿರಲು
ನಾನೊಬ್ಬ ಪುಸ್ತಕ ಹಿಡಿದಿರಲು
ನಿದ್ದೆಯ ಜೋಂಪು ಹತ್ತಿತ್ತು

ಬೆಳ್ಳನೆ ಬೆಳಕು ಹರಿದಿರಲು
ನಿದ್ದೆಯು ನನ್ನ ಬಿಡದಿರಲು
ಎಲ್ಲರು ಎದ್ದು ಓದಿರಲು
ನಾನೊಬ್ಬ ನಿದ್ದೆ ಮಾಡಿರಲು

ಪ್ರತಿ ದಿನ ಹೀಗೆ ಸಾಗಿತ್ತು
ಓದುವುದ್ಹಾಗೆ ಉಳಿದಿತ್ತು

ಋತುಗಳು ಎಲ್ಲಾ ಉರುಳಿರಲು
ಪರೀಕ್ಷಾ ಋತುವು ಬಂದಿರಲು
ನಿದ್ದೆಯು ನನ್ನ ಬಿಡದಿರಲು
ಓದುವುದ್ಹಾಗೆ ಉಳಿದಿತ್ತು.

ಪರೀಕ್ಷೆಗಳೆಲ್ಲಾ ಮುಗಿದಿರಲು
ಪರಿಣಾಮಕ್ಕಾಗಿ ಕಾದಿರಲು
ಬಂದಿತು ಪರಿಣಾಮ ನಾಪಾಸೆಂದು
ಓಡಿತು ನಿದ್ದೆ ನಾ ಇರೆನೆಂದು

೧೯೯೩

0 comments: