24 Nov.
Posted by
ಬಡಗಿ
|
0
comments
ಹೈದರಾಬಾದಿನ ಹೈರಾಣಗಳು - ೩ ಅಣ್ಣಾಬಾಂಡ್ ವಿ ಗಬ್ಬರ್‌ಸಿಂಗ್
ನನ್ನ ಗೆಳೆಯನಿಗೆ "ಅಣ್ಣ ಬಾಂಡ್" ಚಿತ್ರವನ್ನು ಹೈದರಾಬಾದಿನಲ್ಲೇ ನೋಡಬೇಕೆಂದು ಅವನು ಬೆಂಗಳೂರಿಗೆ ಹೋದಾಗ ನೋಡಿಬರಬಾರದೆಂದು ಚಿತ್ರ ಬಿಡುಗಡೆಯಾಗುವ ಎರಡು ತಿಂಗಳ ಮುಂಚಿನಿಂದ ಹೇಳಿಕೊಂಡು ಬಂದಿದ್ದೆ. ಕೊನೆಗೂ ಹೈದರಾಬಾದಿನಲ್ಲಿ ಚಿತ್ರ ಬಿಡುಗಡೆಯಾಯಿತು. ಆ ವಾರವೇ ನಾನು ಬೆಂಗಳೂರಿಗೆ ಹೊರಡಬೇಕಾದ್ದರಿಂದ, ಅವನಿಗೆ ಮುಂದಿನವಾರ ಹೋಗಿ ಬರೋಣವೆಂದು ಹೇಳಿದೆ.
ಹೈದರಾಬಾದಿನಲ್ಲಿ ಕನ್ನಡ ಚಿತ್ರಗಳನ್ನು ಬೆಳಗಿನ ಒಂದು ಆಟ ಶನಿವಾರ ಮತ್ತು ಭಾನುವಾರಗಳಂದು "ಪ್ರಸಾದ್" ಚಿತ್ರ ಸಮೂಹದಲ್ಲಿ ಬಿಡುಗಡೆ ಮಾಡುತ್ತಾರೆ. ಬೆಳಗಿನ ಆಟ ಬೆಳಿಗ್ಗೆ ಒಂಭತ್ತಕ್ಕೆ. ಶನಿವಾರ ಬೆಳಿಗ್ಗೆ ಬೇಗ ಏಳಲು ಆಗದ್ದರಿಂದ, ಭಾನುವಾರ ಹೋಗೋಣವೆಂದು ನಿರ್ಧರಿಸಿದೆವು. ಭಾನುವಾರ ತಿಂಡಿ ಸಹ ತಿನ್ನದೆ ಮನೆಯನ್ನು ಎಂಟಕ್ಕೆ ಬಿಟ್ಟೆವು.
ನಮ್ಮ ದುರಾದೃಷ್ಟವೆಂಬಂತೆ ಅಂದು ಕನ್ನಡ ಚಿತ್ರ ಅಣ್ಣಾಬಾಂಡ್ ಪ್ರದರ್ಶನ ಇಲ್ಲ. ಕಾರಣ ಹೇಳಲು ಯಾರು ಸಿದ್ದರಿರಲಿಲ್ಲ. ನನ್ನ ಅಂದಾಜಿನ ಪ್ರಕಾರ ವೀಕ್ಷಕರು ಕಡಿಮೆ ಇದ್ದಿರಬಹುದು. ಆನ್‌ಲೈನ್‌ನಲ್ಲಿ ಚಿತ್ರ ಮುಂಗಡ ಹೆಚ್ಬು ಜನ ಬುಕ್ ಮಾಡಿದ್ದರೆ ಪ್ರದರ್ಶನಗೊಳ್ಳುತ್ತಿತ್ತೋ ಏನೋ. ಎಷ್ಟೋ ಜನಕ್ಕೆ ಕನ್ನಡ ಚಿತ್ರ ಹೈದರಾಬಾದಿನಲ್ಲಿ ಬಿಡುಗಡೆಯಾಗುವುದು ಪ್ರಚಾರದ ಕೊರತೆಯಿಂದ ತಿಳಿಯುವುದೇ ಇಲ್ಲ. ಇದು ಇತರೆ ಕನ್ನಡ ಕಾರ್ಯಕ್ರಮಗಳಿಗೂ ಅನ್ವಯ.
ನಿರಾಶರಾಗಿ ಮರಳಿ ಹಿಂದಿರುಗುವುದು ಬೇಡವೆಂದ ಗೆಳೆಯ ತೆಲುಗು ಚಿತ್ರ "ಗಬ್ಬರ್‌ಸಿಂಗ್" ನೋಡೋಣವೆಂದು ಚೀಟಿ ಪಡೆದ.
0 comments:
Post a Comment