Sunday, January 27, 2013

Posted by ಬಡಗಿ | 0 comments

ನನ್ನ ಬೆತ್ತಲೆ





ನನ್ನ ಬೆತ್ತಲೆಯಾಗಿ ಸೆರೆಹಿಡಿಯಲು
ನಿನಗೇನು ಖುಷಿ!
ನಾ ಹಸಿರಿನ ಸೆರಗ ಹೊದ್ದಿ ನಿಂತಿದ್ದಾಗ
ನೀನೆಲ್ಲಿದ್ದೆಯೋ ಋಷಿ?

ನಾ ಹಸಿರನು ಹೊದ್ದಾಗ ಬಂದು
ನೆಲಸಿದ್ದವು ಗಿಳಿ ಕೋಗಿಲೆಗಳು
ನಾ ಬೆತ್ತಲಾಗಿ ನಿಂತಾಗ
ತಿನ್ನುತಿಹವು ನನ್ನ ಗೆದ್ದಲು ಹುಳುಗಳು

ನನ್ನ ಅಂತರಂಗ ಬಲ್ಲವರಾರು!
ದೇಹ ಸುಡಲು ಕಾಯುತಿದೆ ಚಿತೆಯ ತವರು.
*****

0 comments: