Saturday, March 23, 2013

23 Mar.
Posted by ಬಡಗಿ | 1 comments

ಎಚ್ಚರ - ಚೈನಾ ಬ್ಲೇಡ್‌ಗಳು ಕತ್ತರಿಸಲಿವೆ ನಿಮ್ಮ ಗಲ್ಲ

ಬಹುರಾಷ್ಟ್ರೀಯ ಸಂಸ್ಥೆಗಳ ಬ್ಲೇಡ್‌ಗಳು ಮಾರುಕಟ್ಟೆಗೆ ಬಂದಾಗಿನಿಂದ ಭಾರತೀಯ ಬ್ಲೇಡ್‌ಗಳ ಬಳಕೆ ನಿಲ್ಲಿಸಿದ್ದೆ.  ಆ ಸಂಸ್ಥೆಗಳ ಬ್ಲೇಡನಲ್ಲಿ ದೊರೆಯುತ್ತಿದ್ದ ನುಣುಪಾದ ಶೇವ್ ಭಾರತೀಯ ಬ್ಲೇಡ್‌ಗಳಲ್ಲಿ ದೊರೆಯುತ್ತಿರಲಿಲ್ಲ.  ಆ ಸಂಸ್ಥೆಯ ಬ್ಲೇಡ್‌ಗಳು ಸಾಮಾನ್ಯವಾಗಿ ಕೆಲ ವರ್ಷಗಳ ಹಿಂದೆ ಥಾಯ್ಲೆಂಡ್, ಇಂಡೋನೇಷ್ಯದಿಂದ ಬರುತ್ತಿದ್ದವು.  ಅತ್ಯುತ್ತಮ ಗುಣಮಟ್ಟದ ಬ್ಲೇಡ್‌ಗಳು ಅಲ್ಲಿಂದ ಬರುತ್ತಲಿದ್ದವು.  ಆ ನಂತರ ಆ ಸಂಸ್ಥೆಯವರು ಭಾರತದಲ್ಲೇ ತಯಾರಿ ಶುರುವಿಟ್ಟುಕೊಂಡವು.  ಬ್ಲೇಡ್‌ಗಳ ಗುಣಮಟ್ಟ ಕಡಿಮೆಯಾದವು.

ತೀರ ಇತ್ತೀಚೆಗೆ ಕೊಂಡ ಬ್ಲೇಡ್‌ಗಳಿಂದ ಗಲ್ಲ ಕತ್ತರಿಸಿ ರಕ್ತಸಿಕ್ತವಾಗುತ್ತಿದ್ದವು.  ಒಂದು ಬ್ಲೇಡ್ ಏನೋ ಗುಣಮಟ್ಟ ಕಳಪೆಯೆಂದು ಮತ್ತೊಂದು ಬಳಸಿದೆ, ಎಲ್ಲದರಲ್ಲೂ "ರಕ್ತ ಕೆನ್ನೀರು".  ಯಾಕೆ ಹೀಗೆ ಎಂದು ಮತ್ತೊಂದು ಪ್ಯಾಕೆಟ್ ಖರೀದಿಸಿದೆ, ಮತ್ತೆ ಅದೆ ರಕ್ತ ಸಿಕ್ತ ಕೆನ್ನೆ.  ಬ್ಲೇಡಿನ ತಯಾರಿಕಾ ದೇಶ ನೋಡಲಾಗಿ ತಿಳಿದದ್ದು ಅವು "ಚೈನಾ" ನಿರ್ಮಿತವಾದವೆಂದು.  ಈ ಸಂಸ್ಥೆಯ ಬ್ಲೇಡ್‌ಗಳಿಂದ ನನ್ನ ಗಲ್ಲಕ್ಕೆ ಮುಕ್ತಿನೀಡಿ, ಮರಳಿ ಭಾರತೀಯ ಸಂಸ್ಥೆಗಳು ತಯಾರಿಸಿದ ಬ್ಲೇಡ್‌ಗಳ ಬಳಕೆ ಶುರುಮಾಡಿದ್ದೇನೆ.

1 comments:

makara said...

ಹೀಗಾದರೂ ಭಾರತದ ಗೌರವ ಮೂಡಿತಲ್ಲ ಅದೇ ಸಂತೋಷ.