20 May.
Posted by
ಬಡಗಿ
|
3
comments
ನಿಶ್ಚಯ ಕನ್ನಡ ಫಾಂಟ್
ಫಾಂಟ್ ತಯಾರಿಯ ಕತೆ:
ಕರೋನ ಸಮಯದಲ್ಲಿ ಕನ್ನಡ ಫಾಂಟ್ ಮಾಡಬೇಕೆಂದು ಆಸೆ ಆಯಿತು. ಯೂಟ್ಯೂಬ್ ಹುಡುಕಿದಾಗ ಸಿಕ್ಕಿದ್ದು ಮೊಹಮದ್ ಅಬ್ದುಲ್ಲಾ ರವರ ವಿಡಿಯೋ. ಕೆಲವಶ್ಟು ಪ್ರಯೋಗ ಮಾಡಿ ಹಾಗೆ ನಿಲ್ಲಿಸಿದ್ದೆ.
ಕೆಲ ದಿನಗಳ ನಂತರ ಸುದರ್‍ಶನ-ಶ್ರೀ ಹರ್‍ಷರ ವಿಡಿಯೋಗಳು ಬಂದವು. ಮತ್ತೆ ಚಿಗುರಿದ ಆಸೆ ಕೆಲವಶ್ಟು ಕೆಲಸಕ್ಕೆ ನಾಂದಿ ಆಯಿತು. ಕೊನೆ ಕೊನೆಗೆ ಫಾಂಟ್ ತಯಾರಿ ತುಂಬಾ ಸಮಯ ಹಾಗು ತಾಂತ್ರಿಕ ಅಡಚಣೆಗಳು ಕಂಡು ನಿಂತಿತು. ಬಹಳಶ್ಟು ಆನ್ ಲೈನ್ ಫೋರಂಗಳಲ್ಲಿ ಕೇಳಿ ತಿಳಿಕೊಂಡಾಯಿತು. ಒತ್ತಕ್ಷರಗಳು ಒಂದರ ಮೇಲೊಂದು ಕೂರಲು ಅದಕ್ಕೆ ಪರಿಹಾರ ಕಾಣದಾಯಿತು. ಒಂದೊಂದು ಫಾಂಟ್ ತಯಾರಕರೂ ಒಂದೊಂದು ವಿಧಾನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಂಡಿದ್ದರು. ಒತ್ತಕ್ಷರ ತೊಂದರೆಯಿಂದಾಗಿ ನಿಲ್ಲಿಸಬೇಕಾಯಿತು. ಇತ್ತೀಚೆಗೆ ಶಂಕರ ಶಿವರಾಜನ್ ರವರು ಇದಕ್ಕೆ ಪರಿಹಾರ ತಿಳಿಸಿ ಇ ಕೆಲಸ ಮುಕ್ತಾಯಗೊಂಡಂತೆನಿಸಿದೆ. ನನಗೆ ಸಹಾಯ ಮಾಡಿದವರಿಗೆಲ್ಲ ಈ ಮೂಲಕ ನನ್ನಿಗಳನ್ನು ಅರ್‍ಪಿಸುತ್ತಿದ್ದೇನೆ.
ಈ ದಿನ ನನ್ನ ಮಗಳು "ನಿಶ್ಚಯ" ಳ ಹುಟ್ಟು ಹಬ್ಬದಿನವಾದರಿಂದ, ಅವಳ ಹೆಸರಿನಲ್ಲೇ ಈ ದಿನ ಬಿಡುಗಡೆಗೊಳಿಸಲು ಸುಮುಹೂರ್‍ತವೆಂದು ಫಾಂಟ್ ಅನ್ನು ಬಿಡುಗಡೆಗೊಳಿಸುತ್ತಿದ್ದೇನೆ.
ನಿಮ್ಮ ಅಭಿಪ್ರಾಯ ಮತ್ತು ಕಂಡ ದೋಶಗಳನ್ನು ಕಾಮೆಂಟ್ ನಲ್ಲಿ ತಿಳಿಸಿ.
ನನ್ನಿ, ಕಿಶೋರ್.
3 comments:
ಇದು ನಿಜವಾಗಿಯೂ ಉತ್ತಮ ಕೆಲಸ. ಆಲ್ ದಿ ಬೆಸ್ಟ್
Tumba kushiyaayitu Kishore. Vandanegalu
Tumbaa Khushi aayithu Kishore, abhinandanegalu
Post a Comment