Sunday, July 25, 2010

ನಿನ್ನಲ್ಲಿದೆ ಅಪಾರ ಶಕ್ತಿ

ನಿನ್ನಲ್ಲಿದೆ ಅಪಾರ ಶಕ್ತಿ

ಚಿಂತೆಗೀಡಾದೆಯಾ ಮನವೇ?
ಬಳಲಿ ಬೆಂಡಾದೆಯ ತನುವೇ?
ಇದೇಕೆ ನಿರ್ಜೀವವಾಗಿ ಕುಳೀತಿರುವೆ?

ಏಕೆ ಹೀಗೇಕೆ ಅಳುತಿರುವೆ?
ಸತತ ಸೋಲಿನಿಂದ ನಿರಾಶೆಯಾದೆಯಾ?
ನಿರತ ಪ್ರಯತ್ನದಿಂದಲೂ ಸೋತೆಯಾ?

ಅಳಿಸಿ ಹಾಕು ನಿನ್ನೊಳಗಿನ ಅಪ್ರಯೋಜಕನೆಂಬ ನಿಂದನೆ
ನಿನಗೆ ಶೋಭಿಸದು ಈ ಹತಾಶ ಭಾವನೆ
ಚಿಗುರಿ ಚಿಮ್ಮಲಿ ನಿನ್ನಲ್ಲಿ ಉತ್ಸಾಹದ ಚಿಲುಮೆ
ಹೊಸತನಕ್ಕಾಗಿ ಸದಾ ಮುಡಿಪಾಗಿರಲಿ ನಿನ್ನ ಒಲುಮೆ
ಏಳು ಎದ್ದೇಳು ನಿನ್ನಲ್ಲಿದೆ ಅಪಾರ ಶಕ್ತಿ

ಕಾಯದಿರು ಯಾವ ಹೊರಗಿನ ಸೂರ್ಯನಿಗಾಗಿ
ನಿನ್ನೊಳಗೇ ಅಡಗಿಹನವನು ಬೆಳಗುವುದಕ್ಕಾಗಿ
ಧೈರ್ಯದಿಂದ ಮನ್ನುಗ್ಗು ಬರಲಿ ಯಾವ ಅಡ್ಡಿ ಆತಂಕ
ಛಲದಿಂದ ಹೋರಾಡು ನೀ ಕೊನೆಯ ತನಕ

ಗೆಲುವು ಆಗಲಿ ನಿನ್ನ ಕಾಲ್ಚೆಂಡು
ಈ ಪ್ರಪಂಚ ಅಚ್ಚರಿ ಪಡಲಿ ನಿನ್ನನ್ನು ಕಂಡು
ಏಳು ಎದ್ದೇಳು ನಿನ್ನಲ್ಲಿದೆ ಅಪಾರ ಶಕ್ತಿ.

೨೦೦೨

0 comments:

Share

Twitter Delicious Facebook Digg Stumbleupon Favorites More