Thursday, December 31, 2009

Posted by ಬಡಗಿ | 1 comments

ಉಧ್ಭವ



ಈ ಚಿತ್ರದಲ್ಲಿರುವ ಮರ ಬೆಂಗಳೂರಿನ ಹಳೇ ಮದರಾಸು ರಸ್ತೆ, ಬೆನ್ನಿಗಾನಹಳ್ಳಿಯಲ್ಲಿರುವ ಮೆಟ್ರೋ ನಿಲ್ದಾಣದ ಬಳಿ ಇದೆ. ಸುತ್ತೆಲ್ಲ ಮರಗಳನ್ನು ಕಡಿದ ಮೆಟ್ರೋ ಕಾಮಗಾರಿಯವರು ಇದನ್ನು ಹಾಗೇ ಬಿಟ್ಟಿದ್ದಾರೆ. ಆಲದ ವೃಕ್ಷವಾದ್ದರಿಂದ ಅದನ್ನು ಕಡಿಯದೇ ಹಾಗೇ ಬಿಟ್ಟಿರಬಹುದು. ಪ್ರತಿ ದಿನ ಕಛೇರಿಗೆ ಈ ಮಾರ್ಗವಾಗಿ ಪಯಣಿಸುತ್ತಿದ್ದರಿಂದ ಒಂದು ದಿನ ಇಷ್ಟೊಂದು ಸೊಂಪಾಗಿ ಬೆಳೆದ ಮರ ಹಾಗೇ ಉಳಿದಿದೆ, ಮುಂದೊಂದು ದಿನ ಒಂದು ಸಣ್ಣ ಗುಡಿ ಹಾಗೂ ಪೂಜೆ ಪಡೆಯಲು ಎಲ್ಲ ಅರ್ಹತೆಯನ್ನು ಪಡೆದಿದೆ ಎಂದು ಮನದಲ್ಲಿ ಅಂದುಕೊಂಡು ಸಾಗಿದೆ. ಮರು ದಿನವೇ ಆಶ್ಚರ್ಯ, ಈ ಮರಕ್ಕೆ ಪೂಜೆ, ಪಾನಕ ವಿತರಣೆ! ಮುಂದೆ ಇಲ್ಲಿ ಮೆಟ್ರೋ ರೈಲು, ಬಸ್ಸು ನಿಲ್ದಾಣ ಪ್ರಾರಂಭವಾದಾಗ ಇಲ್ಲಿ ಒಂದು ಗುಡಿ “ಉದ್ಭವ”ಗೊಂಡರೂ ಆಶ್ಚರ್ಯವಿಲ್ಲ.

1 comments:

moonlite:D said...

:) good that the tree was uncut,,
but,,really wonder how ppl will try giving diff dimension to it.!!