Saturday, June 12, 2010

Posted by ಬಡಗಿ | 0 comments

ನೊಕೆರೊ – ೧೦೦


ನೊಕೆರೊ ೧೦೦ – ಇದು ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಸ ಸೌರ ದೀಪ. ಇದರ ವಿಶಿಷ್ಟತೆ ಏನೆಂದರೆ ದೀಪದಲ್ಲೇ ಸೌರ ಫಲಕ ಅಡಗಿರುವುದು. ಹಗಲು ಬಿಸಿಲು ಕಾಯಿಸಿ ಇರುಳು ಬೆಳಕು ನೀಡುವ ದೀಪ, ಮಳೆ ನೀರಿನಿಂದ ಹಾಳಾಗದಂತೆ ತಯಾರಿಸಲಾಗಿದೆ. ಇದರ ಬೆಲೆ ೧೫ ಅಮೆರಿಕನ್ ಡಾಲರ್ ಅಂದರೆ ೭೦೨ ರೂಪಾಯಿಗಳು. ದೀಪ ತೂಗು ಹಾಕಲು ಕೊಂಡಿ ಲಭ್ಯ. ಇದರಲ್ಲಿ ಐದು ಎಲ್.ಇ.ಡಿ ಬಲ್ಬ್ಗಳು ಇದೆ. ಒಂದು ದಿನ ಬಿಸಿಲಿನಲ್ಲಿ ಕಾಯಿಸಿದರೆ ೨ ಗಂಟೆಗಳ ಸತತ ಬೆಳಕು ಲಭ್ಯ. ಇದರ ಬ್ಯಾಟರಿ ಎರಡು ವರ್ಷಗಳವರೆಗೆ ಬಾಳಿಕೆ ಬರುತ್ತದೆ.

ಈ ದೀಪ ಜನಪ್ರಿಯಗೊಳ್ಳಲು ಇನ್ನು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಬೇಕು ಎಂಬುದು ನನ್ನ ಅನಿಸಿಕೆ. ಮಳೆ, ಚಳಿಗಾಲಗಳಲ್ಲಿ ಸೂರ್ಯನನ್ನು ಮೋಡ ತಡೆದಾಗ ವಿದ್ಯುತ್ ಇಲ್ಲದಿದ್ದಾಗ ಅಷ್ಟು ಉಪಯುಕ್ತವಾಗಿರಲಾರದು. ಇದನ್ನು ನಿವಾರಿಸಲು ಇದಕ್ಕೆ ಒಂದು ವಿದ್ಯುತ್ ಚಾರ್ಜರ್ನಿಂದ ಚಾರ್ಜ್ಮಾಡಿಕೊಳ್ಳವ ವ್ಯವಸ್ಥೆ ಆಗಬೇಕು. ಈ ದೀಪ ೨ ಗಂಟೆಗಿಂತ ಹಚ್ಚಿನ ಸಮಯ ಬೆಳಕುಕೊಡುವಂತೆ ರೂಪಿಸಬೇಕಾಗಿದೆ. ಇದರ ಬೆಳಕು ಹೆಚ್ಚು ಸಮಯ ಬರುವಂತಾಗಲು ೫ ಎಲ್.ಇ.ಡಿ ದೀಪಗಳು ಒಮ್ಮೆಲೆ ಉರಿಯುವ ಬದಲು ಒಂದರಿಂದ ಐದು ಎಲ್.ಇ.ಡಿ ದೀಪಗಳು ಬೆಳಕಿನ ಅವಶ್ಯಕತೆಗೆ ತಕ್ಕಂತೆ ಉರಿಯುವಂತಹ ವ್ಯವಸ್ಥೆಯಾಗಬೇಕಾಗಿದೆ.
ದೀಪದ ವಿವರ - http://nokero.com/index.php
ಚಿತ್ರ ಕೃಪೆ: www.engadget.com

0 comments: