Friday, May 30, 2008

Posted by ಬಡಗಿ | 1 comments

ದೋಸೆ ಇಲ್ಲ

ಅಮ್ಮನಿಗೆ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಅಂದರೆ ಏನೋ ಪ್ರೀತಿ. ಅಲ್ಲಿನ ತರಕಾರಿ, ಹೂ, ಇತ್ಯಾದಿ ನಮ್ಮ ಬಡಾವಣೆಗಳಲ್ಲಿ ಸಿಗುವುದಕ್ಕಿಂದ ಕಡಿಮೆ ದರದಲ್ಲಿ ಹಾಗೂ ತಾಜಾವಾಗಿ ದೊರೆಯುತ್ತದೆ. ನಾವು ಮಾರುಕಟ್ಟೆಗೆ ಹೋದಾಗ ಅಲ್ಲಿನ ಹೋಟೆಲಿನಲ್ಲಿ ಮಸಾಲೆ ದೋಸೆ ತಿನ್ನುವುದು ವಾಡಿಕೆಯಾಗಿತ್ತು. ಚಿಕ್ಕ ಹುಡುಗನಾಗಿದ್ದಾಗ ಮಾರುಕಟ್ಟೆಗೆ ಅಮ್ಮನ ಜೊತೆ ಹೋಗುವುದೆಂದರೆ ಏನೋ ಖುಷಿ. ಖರೀದಿಯ ನಂತರದ ದೋಸೆಯಂತು ಗ್ಯಾರೆಂಟಿ. ನಾನು ಬೆಳೆದಂತೆಲ್ಲ ಅಲ್ಲಿನ ಗಲೀಜು, ಗೌಜು ಕಂಡು ಸಿಡುಕತೊಡಗಿದೆ. ಇತ್ತೀಚೆಗೆ ಅಮ್ಮನ ಜೊತೆ ಮಾರುಕಟ್ಟೆಗೆ ಹೋಗಬೇಕಾಯಿತು. ಎಲ್ಲ ವಸ್ತುಗಳನ್ನು ಕೊಂಡ ಮೇಲೆ ಮಾಮೂಲಿನಂತೆ ದೋಸೆ ತಿನ್ನಲು ಹೊರಟೆವು. ನಾವು ಹೋಗುತ್ತಿದ್ದ ಹಳೆಯ ಹೋಟೆಲ್‌ಗಳೆಲ್ಲ ಮುಚ್ಚಿದ್ದವು. ಬಸ್ಸು ನಿಲ್ದಾಣದ ಎದುರಿಗಿದ್ದ ಹೋಟೆಲ್ಲಿಗೆ ಹೋದೆವು. ಅಲ್ಲಿ ಮಸಾಲೆ ದೋಸೆ ಕೇಳಿದರೆ "ಇಲ್ಲ" ಎಂಬ ಉತ್ತರ. ಅರೆ! ಬೆಂಗಳೂರಿನ ಹೋಟೆಲಿನಲ್ಲಿ ಮಸಾಲೆ ದೋಸೆ ಇಲ್ಲ ಅಂದ್ರೆ ಏನು? ಏಕೆ ಇಲ್ಲವೆಂದು ವಿಚಾರಿಸಿದೆ. ಆಗ ತಿಳಿದ ವಿಷಯ - ಇತ್ತೀಚೆಗೆ ಹೋಟೆಲಿನಲ್ಲಿ ಕೆಲಸಗಾರರು ಖಾಯಂ ಆಗಿ ಉಳಿಯದೆ, ಕೆಲಸ ಮಾಡಲು ಹುಡುಗರು ಸಿಗುತ್ತಿಲ್ಲ. ಆ ಹೋಟೆಲಿನಲ್ಲಿ ಎಷ್ಟೊಂದು ಕುರ್ಚಿಗಳನ್ನು ಬಂದ್ ಮಾಡಿ ಸೇವೆ ಇಲ್ಲವೆಂದು ಬರೆದಿದ್ದರು. ಹೋಟೆಲಿಗೆ ಹೋದ ಕಾರಣದಿಂದ ಅಲ್ಲಿ ಲಭ್ಯವಾದ ಇಡ್ಲಿಯನ್ನು ತಿಂದು ಮರಳಿದೆವು.

1 comments:

ನಮಸ್ಕಾರ ಕಿಶೋರ್, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.


ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗ