Monday, June 23, 2008

Posted by ಬಡಗಿ | 0 comments

ಹಾಲೋಜನ್ ಹಾಕಿಸಿ


ಕತ್ತಲಲ್ಲಿ ಮೊಪೆಡ್ ಓಡಿಸಲು ಬಹಳ ಕಷ್ಟ ಪಡಬೇಕಾಗಿತ್ತು. ಅದರಲ್ಲಿ ಬರುತ್ತಿದ್ದ ಮಂದ ಬೆಳಕಿನಲ್ಲಿ ಎದುರಿಗೆ ಯಾರಾದರು ಬಂದರೆ ತೀರ ಹತ್ತಿರದವರೆವಿಗೂ ಕಾಣಿಸುತ್ತಿರಲಿಲ್ಲ. ಹತ್ತಿರವಾದಾಗ ಬ್ರೇಕ್ ಹಾಕಿದರೆ ಅದು ಥಟ್ ಅಂತ ನಿಲ್ಲುತ್ತಿರಲಿಲ್ಲ. ಮೊಪೆಡ್‌ಗಳಿಗೆ ಡಿಸ್ಕ್ ಬ್ರೇಕ್ ಇಲ್ಲ ನೋಡಿ! ಈ ರೀತಿ ಹಲವಾರು ಮೈಲುಗಳನ್ನು ಕತ್ತಲಲ್ಲಿ ನನ್ನ ಮೊಪೆಡ್‌ನಲ್ಲಿ ಕ್ರಮಿಸಿದ್ದಿದೆ. ಅದು ಬಹಳ ನಿಯತ್ತಿನ ನಾಯಿಯಂತೆ ನನಗಾಗಿ ಓಡಿದೆ. ಅದನ್ನು ನಾನು ಸಹ ಬಹಳ ಮುತುವರ್ಜಿತನದಿಂದ ನೋಡಿಕೊಂಡಿದ್ದೇನೆ. ಈ ಬೆಳಕಿನ ಸಮಸ್ಯೆಗೆ ಪರಿಹಾರ ಹುಡುಕಬೇಕೆಂದು ನಾನು ಗ್ಯಾರೇಜಿನವನ ಬಳಿ ಅರಿಕೆ ಮಾಡಿಕೊಂಡೆ. ಮೊಪೆಡ್‌ಗಳಲ್ಲಿ ಬ್ಯಾಟರಿ ಇಲ್ಲದಿದ್ದುದರಿಂದ ಬೆಳಕು ಡೈನಮೋದಿಂದ ಹೊರಡುತ್ತದೆ. ಡೈನಮೋ ವಾಹನ ಚಾಲನೆ ಮಾಡಿದಾಗ ಮಾತ್ರ ವಿದ್ಯುತ್ ಉತ್ಪಾದಿಸಿ ವೇಗಕ್ಕನುಸಾರವಾಗಿ ದೀಪದ ಬೆಳಕು ಮೂಡುತ್ತದೆ. ಗ್ಯಾರೇಜಿನವ ಹಾಲೋಜನ್ ದೀಪ ಬಳಸಲು ಸೂಚಿಸಿ ಅದು ಕೊಂಚ ದುಬಾರಿ ಎಂದೂ ಹೇಳಿದ. ಸರಿ ಹಾಲೋಜನ್ ದೀಪ ಹಾಕಲು ಸೂಚಿಸಿದೆ. ಮೊದಲಿನ ಬೆಳಕಿಗೆ ಹೋಲಿಸಿದರೆ ಬೆಳಕು ಬಹಳ ಚುರುಕಾಗಿ ಮೂಡಿ ಬಂದಿದೆ ಹಾಗೂ ಬಹಳ ಉಪಯೋಗವಾಗಿದೆ. ನಿಮ್ಮ ವಾಹನಗಳ ದೀಪಗಳನ್ನು ಹಾಲೋಜೆನ್‌ಗೆ ಬದಲಾಯಿಸಿ ಮತ್ತು ಹೆಚ್ಚು ಬೆಳಕಿನ ಸುರಕ್ಷಿತ ಪ್ರಯಾಣ ಮಾಡಿ.

0 comments: