Thursday, April 10, 2008

Posted by ಬಡಗಿ | 0 comments

ಷೆಲ್ ಪೆಟ್ರೋಲ್

ಷೆಲ್ ಪಂಪುಗಳು ಶುರುವಾದಾಗ ಏನೋ ಒಂಥರಾ ಅನುಭವವಾಯಿತು. ಅದುವರೆವಿಗೂ ಆಯ್ದ ಭಾರತ್ ಪೆಟ್ರೋಲಿಯಂ ಪಂಪುಗಳಿಗೇ ಸೀಮಿತವಾಗಿದ್ದ ನಾನು ಷೆಲ್ ಪಂಪು ಕಂಡಾಗ ಅದರ ಸ್ವಚ್ಛತೆ, ಉಚಿತ ಗಾಳಿ, ಶೌಚಾಲಯ ವ್ಯವಸ್ಥೆ, ಉಚಿತವಾಗಿ ಕಾರಿನ ಗಾಜನ್ನು ಒರೆಸುವಿಕೆ ಇತ್ಯಾದಿ ಕಂಡು ಪುಳಕಗೊಂಡೆ. ಅಲ್ಲೇ ಪೆಟ್ರೋಲ್ ತುಂಬಿಸುತ್ತಿದ್ದೆ. ನಮ್ಮ ಸರಕಾರಿ ಸ್ವಾಮ್ಯದ ಪಂಪುಗಳಲ್ಲಿ ಏಕೆ ಈ ರೀತಿ ಇಲ್ಲ ಎಂದು ಅಲ್ಲಗಳೆಯುತ್ತಿದ್ದೆ. ನಾನು ಹೊಸ ದಿಚಕ್ರವಾಹನ ಕೊಂಡಾಗ ಮೊದಲ ಬಾರಿ ಪೆಟ್ರೋಲ್ ತುಂಬಿಸಲು ಷಲ್ ಪಂಪಿಗೇ ಹೋದೆ. ಹೀಗೆ ದಿನ ಕಳೆದಂತೆ ಷೆಲ್ ಪಂಪುಗಳಲ್ಲಿ ಸಾಮಾನ್ಯ ಪೆಟ್ರೋಲ್ ಅಲಭ್ಯವಾಗುತ್ತಿತ್ತು. ಅಲ್ಲಿ ಸ್ಪೆಷಲ್ ಪೆಟ್ರೋಲ್ ಇರುತ್ತಿತ್ತು. ನಮ್ಮ ಕಛೇರಿಯ ಬಳಿ ಇರುವ ಪಂಪಿನಲ್ಲಿ ಆ ರೀತಿಯಾಗುತ್ತಿದೆ, ಇತರೆ ಷೆಲ್ ಪಂಪಿನಲ್ಲಿ ಸಿಗುತ್ತದೆ ಎಂದುಕೊಂಡಿದ್ದೆ. ಒಮ್ಮೆ ಬೇರೆ ಷೆಲ್ ಪೆಟ್ರೋಲ್ ಪಂಪಿನಲ್ಲೂ ವಿಚಾರಿಸಿದೆ. ಅಲ್ಲೂ ಸಾಮಾನ್ಯ ಪೆಟ್ರೋಲ್ ಇಲ್ಲ. ಹೀಗೆ ಯಾವ ಷೆಲ್ ಪಂಪುಗಳಲ್ಲೂ ಸಾಮಾನ್ಯ ಪೆಟ್ರೋಲ್ ಇಲ್ಲದಂತಾಗಿ ನಾನು ಪುನಃ ಭಾರತ್ ಪೆಟ್ರೋಲಿಯಂ ಪಂಪುಗಳಿಗೆ ಎಡತಾಕುವಂತಾಯಿತು.

ಒಂದು ಪುಸ್ತಕದಲ್ಲಿ ಪೆಟ್ರೋಲಿನಲ್ಲಿ ಸಾಮಾನ್ಯ ಮತ್ತು ಅಸಾಮಾನ್ಯ (ಸ್ಪೆಷಲ್) ಎಂಬುದು ಇಲ್ಲ, ಎಲ್ಲ ಬುರುಡೆ ಎಂದು ಓದಿದ್ದ ನೆನಪಿದ್ದುದರಿಂದ ಅಸಾಮಾನ್ಯ ಪೆಟ್ರೋಲ್ ಹೆಚ್ಚು ಹಣ ತೆತ್ತು ತುಂಬಿಸಲು ಮನ ಒಪ್ಪುತ್ತಿರಲಿಲ್ಲ. ಯಾವುದೇ ಸೇವೆ ಉಚಿತವಾಗಿ ಬರಲು ಸಾಧ್ಯವೇ! ಆ ಸ್ವಚ್ಛತೆ, ಉಚಿತ ಗಾಳಿ, ಇತ್ಯಾದಿಗಳಿಗೆಲ್ಲ ಬರಲು ಹೇಗೆ ಸಾಧ್ಯ. ಅದಕ್ಕಾಗಿಯೆ ಸಾಮಾನ್ಯ ಪೆಟ್ರೋಲ್ ಅಲಭ್ಯವಾಗಿದೆ ಈ ಪಂಪುಗಳಲ್ಲಿ ಎಂದು ಜರಿಯುತ್ತಿದ್ದೆ.

ಮೊನ್ನೆ ಪತ್ರಿಕೆಗಳಲ್ಲಿ ರಿಲಯನ್ಸ್ ಪಂಪುಗಳು ಮುಚ್ಚಿದ ಬಗ್ಗೆ ವರದಿ ಕಂಡಾಗ ಸತ್ಯ ಅರಿವಾಯಿತು. ಸರಕಾರಿ ಸ್ವಾಮ್ಯದ ಪಂಪುಗಳಿಗೆ ಸಬ್ಸಿಡಿಗಳು ಲಭ್ಯ ಆದರೆ ಈ ಖಾಸಗಿ ಪಂಪುಗಳಿಗೆ ಸಬ್ಸಿಡಿಗಳು ಇಲ್ಲದ್ದರಿಂದ ಅವು ಮುಚ್ಚುವಂತಾಗಿದೆ ಹಾಗು ಅವರು ಮಾರುಕಟ್ಟೆ ಯಲ್ಲಿ ಉಳಿಯುವುದಕ್ಕಾಗಿ ಅಸಮಾನ್ಯ ಪೆಟ್ರೋಲ್ ಮಾರಾಟ ಮಾಡುವಂತಾಗಿದೆ.

0 comments: