Wednesday, April 25, 2007

Posted by ಬಡಗಿ | 2 comments

ಒಂದು ಕ್ಯಾಮೆರಾ ಕಥೆ


ಕ್ಯಾಮೆರಾ ಅಂದರೆ ನನಗೆ ಏನೋ ಹುಚ್ಚು. ನಾನು ಮೊದಲು ಕ್ಯಾಮೆರಾ ಕೊಳ್ಳಲು ಬಹಳ ವರ್ಷಗಳೇ ಕಾಯಬೇಕಾಯಿತು. ಅದಕ್ಕೂ ಮುಂಚೆ ಬಂಧುಗಳ, ಸ್ನೇಹಿತರ ಕ್ಯಾಮೆರಾಗಳನ್ನು ಉಪಯೋಗಿಸಿದೆ. ಆದರೆ ಬೇರೊಬ್ಬರ ಕ್ಯಾಮೆರಾ ಉಪಯೋಗಿಸಲು ಏನೋ ಮುಜುಗರ. ಹಾಗಾಗಿ ಹೇಗಾದರೂ ಮಾಡಿ ಒಂದು ಕ್ಯಾಮೆರಾ ಕೊಂಡುಕೊಳ್ಳಬೇಕೆಂದು ೧೯೯೯ ರಲ್ಲಿ ಬೋನಸ್ಸ್ ದುಡ್ಡಿನಲ್ಲಿ ಒಂದು ಮುಕ್ಕಾಲು ಸಾವಿರ ರೂಪಾಯಿಯ ಒಂದು ಕ್ಯಾಮೆರಾ ಕೊಂಡುಕೊಂಡೆ. ನನ್ನ ಮೊದಲ ಕ್ಯಾಮೆರಾ ಒಲಿಂಪಸ್. ಕ್ಯಾಮೆರಾ ಕೊಂಡುಕೊಂಡದ್ದೇನು ಸರಿ ಆದರೆ ಅದಕ್ಕೆ ರೀಲು, ಮುದ್ರಣ ಹಾಕಿಸುವುದು ದುಬಾರಿಯಾಗಿ ಕಂಡಿತು. ಬಹಳ ಅಪರೂಪಕ್ಕೆ ಮಾತ್ರ ಉಪಯೋಗಿಸುವಂತಾಯಿತು. ಹಲವು ರೀಲುಗಳು ಮುದ್ರಣಕ್ಕೆ ಕಾಸು ಸಾಲದೆ ಹಾಗೆ ಉಳಿದವು, ಕಳೆದವು. ನಂತರ ದೀಪಾವಳಿ ಪಟಾಕಿ ಚೀಟಿಯ ಜೊತೆ ಒಂದು ಕ್ಯಾನನ್ ಕ್ಯಾಮೆರಾ ಸಿಕ್ಕಿತು. ನಂತರ ಸೀಲಿಂಗ್ ಫ್ಯಾನ್ ಕೊಂಡಾಗ ಬ್ಯಾಟರಿ ರಹಿತ ಕ್ಯಾಮೆರಾ ಉಚಿತವಾಗಿ ದೊರೆಯಿತು. ಕ್ಯಾಮೆರಾಗಳು ಇದ್ದರೂ ಅದರ ವೆಚ್ಚಗಳು ದುಬಾರಿಯಾದ್ದರಿಂದ ಇದ್ದೂ ಇಲ್ಲದಂತಾದವು. ಮದುವೆ ನಿಷ್ಕರ್ಷೆಯಾದಾಗ ಕ್ಯಾಮೆರಾದ ಅವಶ್ಯಕತೆ ಕಂಡಿತು. ಆದರೆ ಆ ಹಳೆಯ ಕ್ಯಾಮೆರಾಗಳು, ರೀಲು, ಮುದ್ರಣ ವೆಚ್ಚಗಳೆಲ್ಲ ಹೊಚ್ಚ ಹೊಸ ಡಿಜಿಟಲ್ ಕ್ಯಾಮೆರಾ ಕೊಳ್ಳಲು ಪ್ರೇರೇಪಿಸಿದುವು. ಅಷ್ಟು ದುಬಾರಿಯಲ್ಲದ ಒಂದು ಒಳ್ಳೆಯ ಡಿಜಿಟಲ್ ಕ್ಯಾಮೆರಾ ಕೊಳ್ಳುವುದೆಂದು ನಿರ್ಧರಿಸಿ ಮೂರ್‍ನಾಲ್ಕು ಅಂಗಡಿ ತಿರುಗಿ ಹತ್ತು ಸಾವಿರದ ಒಳಗಿನ ಒಂದು ಕ್ಯಾಮೆರಾ ಕೊಳ್ಳುವುದೆಂದು ನಿರ್ಧರಿಸಿದೆ. ಆಗ ವಿಜ್ಹ್ ಅಂಗಡಿಯವರು ಕ್ಯಾಮೆರಾಗಳ ಮೇಲೆ ರಿಯಾಯಿತಿ ಇದೆಯೆಂದು ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದ್ದರು. ಸರಿ ಹೋಗಿ ನೋಡುವ ಎಂದು ಹೊರಟೆ. ಅಲ್ಲಿ ಹೋದಾಗ ಹದಿಮೂರು ಸಾವಿರದ ಒಂದು ಕ್ಯಾಮೆರಾ ನನಗೆ ತುಂಬಾ ಹಿಡಿಸಿತು. ಆದರೆ ಕೊಳ್ಳಲು ದುಬಾರಿಯೆನಿಸಿ ಅಂಗಡಿಯಿಂದ ಹೊರಬಿದ್ದೆ. ನಂತರ ಮನೆಗೆ ಬಸ್ಸು ಹಿಡಿಯಲು ನಡೆಯುತ್ತಾ ಹೊರಟೆ. ನಂತರ ಮೊಬೈಲ್ಗಳೆಲ್ಲ ಈಗ ಹದಿನೈದರಿಂದ ಇಪ್ಪತ್ತು ಸಾವಿರ ಇರುವಾಗ ಕ್ಯಾಮೆರಾಗೆ ಅಷ್ಟು ದುಡ್ಡು ಸರಿಯಾಗಿಯೇ ಇದೆಯೆನಿಸಿತು. ಮನೆ ತಲುಪಿದೆ, ಯೋಚಿಸಿದೆ. ಒಂದು ಕ್ಯಾಮೆರಾ ಕೊಳ್ಳಲು ಇಷ್ಟೊಂದು ಕಸರತ್ತೆ? ಛೇ!! ಮಾರನೆಯ ದಿನ ಹೊರಟು ವಿಜ್ಹ್ ಅಂಗಡಿ ತಲುಪಿದೆ. ನೋಡಿದರೆ ಹದಿಮೂರು ಸಾವಿರದ ಕ್ಯಾಮೆರಾ ಕೆಳಗಡೆ ಇಪ್ಪತ್ತು ಸಾವಿರದ ಪ್ರೊಫೆಷನಲ್ ಕ್ಯಾಮೆರಾ ಕಂಡಿತು. ಅದರ ಪಕ್ಕದಲ್ಲಿ ಅದೇ ಮಾದರಿಯ ಕ್ಯಾಮೆರಾ ಕೆಲ ದಿನಗಳ ಹಿಂದೆ ಬಂದದ್ದು ಇತ್ತು. ಅದರ ಬೆಲೆ ಇಪ್ಪತ್ನಾಲ್ಕು ಸಾವಿರ. ಅದೇ ಕ್ಯಾಮೆರಾ ಆದರೆ ನಾಲ್ಕು ಸಾವಿರದ ಉಳಿತಾಯ! ಜೀವನದಲ್ಲಿ ಅಪರೂಪಕ್ಕೊಮ್ಮೆ ಕೊಳ್ಳುವ ವಸ್ತು ಕ್ಯಾಮೆರಾ. ಕೊಂಚ ದುಬಾರಿಯಾದರೂ ಒಳ್ಳೆಯದೇ ಕೊಳ್ಳುವ ಎನಿಸಿ ಇಪ್ಪತ್ತು ಸಾವಿರದ ಕ್ಯಾಮೆರಾವನ್ನು ಕೊಂಡುಕೊಂಡು ಅಂಗಡಿಯಿಂದ ಹೊರಬಿದ್ದೆ. ಅತಿ ಶೀಘ್ರದಲ್ಲೇ ಒಂದು ಚಿತ್ರಗಳ ಬ್ಲಾಗ್ ತೆರೆಯಲು ನಿರ್ಧರಿಸಿರುವೆ. ವೀಕ್ಷಿಸುವಿರಿ ತಾನೇ?

2 comments:

ನಿಮ್ಮ ಕ್ಯಾಮರ ಕಂಡು ಹುಚ್ಚೆನಿಸಿತು. ನಿಮ್ಮ ಕ್ಲಿಕ್ಕಿಸಿದ ಚಿತ್ರಗಳನ್ನು ಕಾಣಲು ಕಾತುರನಾಗಿದ್ದೇನೆ.

Anonymous said...

Yeah. viparyaasa karavaada kathe anna ashut channaagi personify maadi heliddira.. olle kelsa.. santhosha! :D
--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...