Wednesday, April 04, 2007

Posted by ಬಡಗಿ | 0 comments

ಸಂತರು ಮತ್ತು ಪತ್ರಿಕೆ

ಲಂಕೇಶ್ ಪತ್ರಿಕೆಯ ಲಂಕೇಶ್ ಬದುಕಿದ್ದ ತನಕ ಉತ್ತುಂಗಕ್ಕೇರಿದ್ದ ಪತ್ರಿಕೆ ಅವರ ಮರಣಾನಂತರ ಅಷ್ಟೊಂದು ಪ್ರಚಾರದಲ್ಲಿಲ್ಲವೆಂದು ಭಾಸವಾಗುತ್ತಿದೆ. ಹಾಗೇ ಹಾಯ್! ಬೆಂಗಳೂರು. ಲಂಕೇಶ್ ಇದ್ದಾಗ ಹಾಯ್ ಬೆಂಗಳೂರು ಅಷ್ಟೊಂದು ಪ್ರಚಾರದಲ್ಲಿರಲಿಲ್ಲ. ಈ ಪತ್ರಿಕೆಗಳು ಒಂದು ವ್ಯಕ್ತಿಯಮೇಲೆ ನಿಂತಿರುವುದರಿಂದ ಹಾಗೆಯೇ? ಅಥವಾ ಬದಲಾವಣೆಯ ಗಾಳಿಯಿಂದಾಗಿ ಹಾಗೆಯೇ? ಬಲ್ಲವರು ತಿಳಿಸಿ.

ಸಂತರ ಕಡೆ ತಿರುಗಿದಾಗಲೂ ಅದೇ ಅನಿಸುತ್ತಿದೆ. ಪುಟ್ಟಪರ್ತಿ ಸಾಯಿಬಾಬಾ ಶಕ್ತರಾಗಿ ಇದ್ದಾಗ ಶ್ರೀ ರವಿಶಂಕರ್‍ ರವರು ಅಷ್ಟೊಂದು ಬೆಳಕಿಗೆ ಬರಲಿಲ್ಲ. ಏಕೆ ಹೀಗೆ. ಒಂದು ಸೂರ್ಯನಿದ್ದಾಗ ಇನ್ನೊಬ್ಬ ಸೂರ್ಯ ಕಣ್ಣಿಗೆ ಕಾಣನೇ? ಕಾಲವೇ ತಿಳಿಸಬೇಕು.

0 comments: