16 Dec.
Posted by
ಬಡಗಿ
|
0
comments
ಹಾಸಿಗೆಯ ಚಿಟ್ಟೆಯ ಹಾಸು
ಉಪಯೋಗಿಸದಿರು ಗೆಳತಿ ಸೋಡಾ
ತುಂಬಿದ ಮಾರ್ಜಕಗಳನ್ನ
ಸುಟ್ಟಾವು ನಿನ್ನ ಮೃದುವಾದ ಕೈ
ಹಾಗೂ ಹಾಸಿಗೆ ಹಾಸಿನ ಚಿಟ್ಟೆಗಳನ್ನ
ಎಳೆ ಬಿಸಿಲಿನಲ್ಲಿ ಒಣಹಾಕಿ
ಬಿರು ಬಿಸಿಲು ಬಂದಾಗ ಒಳಹಾಕು
ಬಿರು ಬಿಸಿಲು ಸುಟ್ಟು ಚಿಟ್ಟೆಯ
ಬಣ್ಣಗಳು ಮಾಸಿಯಾವು
ನೆನಸದಿರು ಹಾಸನ್ನು ಬಿಸಿನೀರೊಳಗೆ,
ಬಿಸಿಯು ಚಿಟ್ಟೆಗಳಿಗೆ ತಾಕಿ
ಬಣ್ಣ ಬಿಟ್ಟಾವು ಒಳ ಒಳಗೆ
ಇಸ್ತ್ರಿಯ ಹಾಕು ಹಾಸಿಗೆ,
ಯಾವುದೇ ನೆರಿಗೆ ಕಾಣದ ಹಾಗೆ
ಹಾಸಿ ಹಾಸಿಗೆಗೆ ಹೊಚ್ಚ ಹೊಸದರ ಹಾಗೆ
*****
0 comments:
Post a Comment