Saturday, July 12, 2008

Posted by ಬಡಗಿ | 1 comments

ಇಸ್ಲಾಮಿಕ್ ಉಗ್ರವಾದವನ್ನು ಅರ್ಥೈಸುವಿಕೆ


ಲೇಖಕರು: ಎಚ್.ಎ.ಗನಿ
ISBN: 81-8318-116-3

ನಾಗರೀಕರನ್ನು ಹಿಂಸಿಸುವುದೇ ಉಗ್ರವಾದ. ಉಗ್ರವಾದವನ್ನು ವಿವಿಧ ರಾಷ್ಟ್ರಗಳು, ಜನರು ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ತಮ್ಮ ತಮ್ಮ ಅನುಕೂಲಗಳಿಗನುಗುಣವಾಗಿ ಬಣ್ಣಿಸಿಕೊಂಡಿದ್ದಾರೆ, ಬಳಸಿಕೊಂಡಿದ್ದಾರೆ. ಈಗಲೂ ಸಹ ಉಗ್ರವಾದವನ್ನು ಅಳೆಯುವುದಕ್ಕೆ ಒಂದು ಮಾನದಂಡ ಇಲ್ಲದಿರುವುದು ಖೇದಕರ. ಉಗ್ರವಾದದವು ಎಲ್ಲಾ ಧರ್ಮಗಳಲ್ಲೂ ಕಾಣಬಹುದು ಆದರೆ ಅದನ್ನು ಹೆಚ್ಚಾಗಿ ಇಸ್ಲಾಮ್ ಧರ್ಮಕ್ಕೆ ಅಂಟಿಸಲಾಗಿದೆ.

ಯಾವುದೇ ಧರ್ಮ ಹಿಂಸೆಯನ್ನು ಪ್ರಚುರಪಡಿಸುವುದಿಲ್ಲ. ಅಂತೆಯೇ ಇಸ್ಲಾಮ್ ಕೂಡ. ಕೆಲ ಜನರ ಕುಕೃತ್ಯಗಳನ್ನು ಇಡೀ ಇಸ್ಲಾಮ್ ಧರ್ಮಕ್ಕೆ ಅಂಟಿಸುವ ಕಾರ್ಯವನ್ನು ಹಲವಾರು ಮಾಧ್ಯಮಗಳು, ಜನರು ಅವ್ಯಾಹತವಾಗಿ ನಡೆಸುತ್ತಿರುವುದರಿಂದ ಇತರ ಮತಬಾಂಧವರು ಇಸ್ಲಾಮ್ ಧರ್ಮೀಯರನ್ನು ಉಗ್ರವಾದಿಗಳೆಂದು ನೋಡುವಂತೆ ಮಾಡಿದೆ.

`ಜಿಹಾದ್’ ಅನ್ನು ಬಹುಪಾಲು ಎಲ್ಲರೂ ಇಸ್ಲಾಮ್ ಧರ್ಮೀಯರನ್ನು ಸೇರಿಸಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. `ಜಿಹಾದ್’ ಎಂದರೆ ಶ್ರಮ, ಹೋರಾಟ. `ಜಿಹಾದ್’ ಎಂದರೆ ತಪ್ಪು ಕಲ್ಪನೆಗಳ, ನೋಟಗಳ ಮತ್ತು ಕೃತ್ಯಗಳ ವಿರುದ್ಧದ ಹೋರಾಟ. `ಜಿಹಾದ್’ ಅನ್ನು ಹಲವರು ಯುದ್ಧಕ್ಕೆ ಹೋಲಿಸಿ, ಉಗ್ರವಾದಕ್ಕೆ ಹೋಲಿಸಿದ್ದಾರೆ. `ಜಿಹಾದ್’ ಅನ್ನು ಸರಿಯಾಗಿ ಅರ್ಥೈಸುವುದೆಂದರೆ ಅದು ಅಜ್ಞಾನ, ಬಡತನ, ಅನಕ್ಷರತೆ, ರೋಗಗಳ ವಿರುದ್ಧದ ಹೋರಾಟ.

ಇಸ್ಲಾಮ್ ಧರ್ಮವು ಶಾಂತಿಯನ್ನು ಬೋಧಿಸುತ್ತದೆ. ಪ್ರವಾದಿ ಮೊಹಮ್ಮದರು ಹೇಳುವಂತೆ “ಯಾವುದೇ ಮುಸಲಿಮ್ಮನು ಇತರೆ ಧರ್ಮೀಯರಿಂದ ತೆಗೆದುಕೊಂಡ ಯಾವ ಕೆಲಸವೂ ಅವರ ಸಾಮರ್ಥಕ್ಕಿಂತ ಹೆಚ್ಚಿದ್ದಲ್ಲಿ, ದುರ್ಗುಣದಿಂದ ಕೂಡಿದ್ದಲ್ಲಿ ಕೊನೆಯ ದಿನದಲ್ಲಿ ನಾನವನ ವಿರುದ್ಧವಾಗಿ ನಿಲ್ಲುತ್ತೇನೆ”. ಈ ಪುಸ್ತಕದಲ್ಲಿ ಲೇಖಕರು ಹಲವಾರು ಉಲ್ಲೇಖಗಳನ್ನು ಬಹಳ ಅಚ್ಚುಕಟ್ಟಾಗಿ ಬಳಸಿಕೊಂಡು ಓದುಗರಿಗೆ ಒದಗಿಸಿದ್ದಾರೆ.

ಉಗ್ರವಾದದ ಯುದ್ಧವು ಮನುಷ್ಯರ ಮನಸ್ಸಿನಲ್ಲಿ ಹುಟ್ಟುತ್ತದೆ. ಅದನ್ನು ಅಲ್ಲೇ ಕಾದಾಡಬೇಕು.

1 comments:

Anonymous said...

ನಮಸ್ತೇ.
ಗನಿ ಅವರ ಪುಸ್ತಕ ಶೀಘ್ರದಲ್ಲೇ ಕೊಂಡೋದುವೆ. ಮಾಹಿತಿಗೆ ಧನ್ಯವಾದ.
ಆದರೆ....
“ಅದನ್ನು ಹೆಚ್ಚಾಗಿ ಇಸ್ಲಾಮ್ ಧರ್ಮಕ್ಕೆ ಅಂಟಿಸಲಾಗಿದೆ"
- ಇದನ್ನು ನಾನು ಒಪ್ಪುವುದಿಲ್ಲ. ಉಗ್ರವಾದವನ್ನು ಇಸ್ಲಾಮಿಗೆ ಅಂಟಿಸಲಾಗಿಲ್ಲ, ಅದು ತನಗೆ ತಾನೇ ಅಪ್ಪಿಕೊಂಡಿದೆ.
“`ಜಿಹಾದ್’ ಅನ್ನು ಸರಿಯಾಗಿ ಅರ್ಥೈಸುವುದೆಂದರೆ ಅದು ಅಜ್ಞಾನ, ಬಡತನ, ಅನಕ್ಷರತೆ, ರೋಗಗಳ ವಿರುದ್ಧದ ಹೋರಾಟ"
- ಹೌದು. ಆದರೇನು ಮಾಡುವುದು? ತಮ್ಮ ಧರ್ಮಗ್ರಂಥದಲ್ಲಿ ಏನು ಬರೆದಿದೆ ಅನ್ನೋದನ್ನು ಸ್ವತಃ ಮುಸ್ಲಿಮರೇ ಸರಿಯಾಗಿ ಅರ್ಥೈಸಿಕೊಂಡಿಲ್ಲವಲ್ಲ? ಮೊನ್ನೆ ತಾನೆ ಇಸ್ಲಮಾಬಾದಿನಲ್ಲಿ ಎರಡುಸಾವಿರ ಮಹಿಳೆಯರು “ಕಾಫಿರರನ್ನು ಕೊಲ್ಲುವ ‘ಜಿಹಾದಿ’ಮಕ್ಕಳನ್ನು ಹೆರುವುದಾಗಿ ಪ್ರತಿಜ್ಞೆ ಮಾಡಿದ ವರದಿ ಓದಿದೆ. ಹೀಗೆ ಪ್ರತಿಜ್ಞಾ ದೀಕ್ಷೆ ಕೊಟ್ಟವರು ಮಸೀದಿಯ ಮೌಲ್ವಿಗಳು. ಹಾಗಾದರೆ ಮೊದಲು ಇಸ್ಲಾಮ್ ಅಂದರೇನು, ಅದನ್ನು ಹೇಗೆ ಗ್ರಹಿಸಬೇಕು ಅನ್ನುವ ಪಾಠ ಮೊದಲು ಮಾಡಬೇಕಾಗಿರೋದು ಅವರಿಗೇ ಅಲ್ಲವೇ?

ನಿಮ್ಮ ಕೊನೆಯ ಸಾಲುಗಳು ತೀರ ನಿಜ. ಉಗ್ರವಾದ ಮನುಷ್ಯನ ಮನಸ್ಸಲ್ಲಿ ಹುಟ್ಟುತ್ತೆ. ಅದರೊಂದಿಗೆ ಅಲ್ಲಿಯೇ ಕಾದಾಡಬೇಕು.

ವಂದೇ,
ಚೇತನಾ ತೀರ್ಥಹಳ್ಳಿ