Monday, June 30, 2008

ಮಗು

ನಮ್ಮ ಎದುರು ಮನೆಯಲ್ಲಿ ಇತ್ತೊಂದು ಮಗು
ಅದರ ಮೊಗ ತುಂಬ ಸದಾ ನಗು
ನನ್ನನ್ನು ಕಂಡಾಗ ಬಿಡುತ್ತಿತ್ತು ಪಿಳಿ ಪಿಳಿ ಕಣ್ಣು
ಅದರ ಕೆನ್ನೆ ಮುಟ್ಟಲು ಬಾಳೆಯ ಹಣ್ಣು
ಎತ್ತಿಕೊಳ್ಳಲು ಅದು ಬೆಚ್ಚಗಿನ ಮುದ್ದೆ
ಅರ್ಧ ದಿನ ಮಾಡುತ್ತಿತ್ತು ಬರೀ ನಿದ್ರೆ
ಆಗಾಗ ಆಡಿಸುತ್ತಿದ್ದೆ ಕೂಸುಮರಿ
ತಿನ್ನಲದಕ್ಕೆ ಇಷ್ಟ ಕಡಲೇಪುರಿ
ನಡೆಯಲು ಕಲಿಯುತ್ತಾ ಇಡುತ್ತಿತ್ತು ಅಂಬೆಗಾಲು
ನಮ್ಮ ಮನೆಗೆ ಬಂದಾಗಲೆಲ್ಲ ನಾನದರ ಆಳು
೦೧/೦೨/೦೩

0 comments:

Share

Twitter Delicious Facebook Digg Stumbleupon Favorites More