Monday, March 05, 2007

Posted by ಬಡಗಿ | 0 comments

ಕಲ್ಪನೆ


ನಮ್ಮ ಕಛೇರಿಯ ತಂತ್ರಜ್ಞಾನದ ತೊಂದರೆಗಳನ್ನು ಒಂದು ತಂತ್ರಂಶದ ಮೂಲಕ ತಿಳಿಸಬೇಕು. ಅದನ್ನು ದೂರವಾಣಿ ಮೂಲಕ ವಿಚಾರಿಸಲು ತಂತ್ರಜ್ಞರು ಇರುತ್ತಾರೆ. ಹೀಗೆ ಹಲವಾರು ತೊಂದರೆಗಳನ್ನು ದಿನಾ ತಂತ್ರಾಂಶದ ಮೂಲಕ ತಿಳಿಸುತ್ತಿದ್ದೆ. ಒಂದು ದಿನ ಇಂಪಾದ ಹೆಣ್ಣು ಧ್ವನಿ ನನ್ನ ತೊಂದರೆಯನ್ನು ಆಲಿಸಲು ನನ್ನ ವಿಸ್ತರಣೆಗೆ ಕರೆ ಮಾಡಿತು. ಕೇಳಿದೊಡನೆ ಆ ಹುಡುಗಿ ಹೇಗಿರಬಹುದೆಂದು ಊಹಿಸತೊಡಗಿದೆ. ಹೇಗೆ ನಗಬಹುದು, ನೋಡಲು ಹೇಗೆ ಇರಬಹುದೆಂದು. ಬೆಳದಿಂಗಳ ಬಾಲೆಯ ಹಾಗೆ….. ಹೀಗೆ ನನ್ನ ತೊಂದರೆಗಳನ್ನು ಇತರ ಗಂಡು ಧ್ವನಿ, ಹೆಣ್ಣು ಧ್ವನಿಗಳು ಆಲಿಸುತ್ತಿದ್ದವು. ಆದರೆ ಆ ಇಂಪಾದ ಧ್ವನಿ ಕೇಳಿದಾಗಲೆಲ್ಲ ಏನೋ ಖುಷಿ, ಬೆಳದಿಂಗಳ ಬಾಲೆಯ ಕಲ್ಪನೆ…. ಒಮ್ಮೆ ಆಕೆಯಿಂದ ವಿಂಚೆ (e-mail) ಬಂತು, ಈ ವಾರಾಂತ್ಯ ಈ ಕಛೇರಿಯಲ್ಲಿ ನನ್ನ ಕೊನೆಯ ದಿನ. ನನ್ನನ್ನು ಸಂಪರ್ಕಿಸಲು ಈ ವಿಂಚೆ ವಿಳಾಸ, ಮೊಬೈಲ್ ಸಂಖ್ಯೆ ವಿವರಗಳೊಂದಿಗೆ. ತಡಮಾಡದೆ ಮೊಬೈಲ್ ಹಚ್ಚಿದೆ. ಪರಿಚಿತ ಧ್ವನಿಯಾದ್ದರಿಂದ ಸ್ವಾಗತಿಸಿದ ಆಕೆ, ಮದುವೆ ನಿಶ್ಚಯವಾದ್ದರಿಂದ ತಾನು ಕೆಲಸ ಬಿಡುತ್ತಿರುವರೆಂದು ತಿಳಿಸಿದರು. ಆಕೆಗೆ ಆಕೆಯನ್ನು ನೋಡುವ ನನ್ನ ಹಂಬಲ ತಿಳಿಸಿದೆ. ಸ್ವಾಗತಿಸಿದ ಆಕೆಯನ್ನು ನೋಡಲು ಹೊರಟೆ. ಭೇಟಿ ಮಾಡಿದೆ. ಆದರೆ..... ನನ್ನ ಕಲ್ಪನೆಯ ಹುಡುಗಿ ಅಲ್ಲಿರಲಿಲ್ಲ. ವಾಸ್ತವಕ್ಕೆ ಬಂದು ಆಕೆಗೆ ಶುಭಾಶಯ ಕೋರಿದೆ. ನನ್ನ ಕಲ್ಪನೆಯ ಹುಡುಗಿಯೇ ಆ ಧ್ವನಿಗೆ ಸೂಕ್ತವೆಂದು ನನ್ನ ಕಾರ್ಯಸ್ಥಾನಕ್ಕೆ ಮರಳಿದೆ.

0 comments: