ಆಸಿಡ್ ಪಾತಕಿ

ಆಸಿಡ್ ಎರಚಿದ್ದ ಪಾತಕಿ ಮೆಹಬೂಬ್‌ಗೆ ಜೀವಾವದಿ ಶಿಕ್ಷೆ ಎಂಬ ವರದಿ ಇಂದು ಪತ್ರಿಕೆಗಳಲ್ಲಿ ಬಂದಿದೆ. ಜೀವಾವದಿ ಶಿಕ್ಷೆ ಜೊತೆಯಲ್ಲಿ ಕಠಿಣ ಶಿಕ್ಷೆಯನ್ನು ಇಂತಹ ವಿಕೃತರಿಗೆ ನೀಡಬೇಕು. ಜೀವಾವದಿ ಶಿಕ್ಷೆ ನೀಡಿದರೆ ಅಷ್ಟೇನು ನೋವನ್ನು ಅವರು ಅನುಭವಿಸರು. ಇಂತಹವರ ಮುಖಕ್ಕೆ ಆಸಿಡ್ ಎರಚಿ ಮುಖವನ್ನು ವಿಕೃತಗೊಳಿಸಿದಾಗ ಮಾತ್ರ ಅದರ ನೋವು ಅವರಿಗೆ ತಿಳಿಯುವುದು. ಆಸಿಡ್ ಎರಚಿಸಿಕೊಂಡವರ ಬದುಕು ನೆನೆಸಿಕೊಳ್ಳಲು ಅಸಾಧ್ಯ. ಅವರು ತಮ್ಮ ವಿಕೃತ ಮುಖ ತೋರಿಸಲು ಆಗದೆ ಗೃಹಬಂಧನದಲ್ಲಿ ಸಾಯುವ ತನಕ ಬದುಕ ಬೇಕು. ಆಸಿಡ್ ಎರಚುವವರಿಗೆ ಧಿಕ್ಕಾರ.
0 comments:
Post a Comment