Monday, June 11, 2012

Posted by ಬಡಗಿ | 0 comments

ಹೈದರಾಬಾದಿನ ಹೈರಾಣಗಳು - ೧ ಹೈದರಾಬಾದಿಗೆ ಪ್ರಯಾಣ


೭-೮ ವರ್ಷಗಳ ಹಿಂದೆ ಮದುವೆಗೆ ಮುಂಚೆ ಹೈದರಾಬಾದಿನಲ್ಲಿ ಒಮ್ಮೆ ಕೆಲಸ ಮಾಡಬೇಕೆನಿಸುತ್ತಿತ್ತು. ಆಗೆಲ್ಲ ಆಂಧ್ರದಲ್ಲಿ ಚಂದ್ರಬಾಬು ನಾಯ್ದು ಸರ್ಕಾರ ಇದ್ದು ಅನೇಕ ಸಂಸ್ಥೆಗಳು ಹೈದರಾಬಾದಿನಲ್ಲಿ ಮನೆಮಾಡಿವೆ ಎಂದು ಪತ್ರಿಕೆಗಳಲ್ಲಿ ಓದಿ ಅಲ್ಲಿ ವಿಪುಲ ಅವಕಾಶಗಳಿರುವುದೆಂದು ಅನಿಸುತ್ತಿತ್ತು. ಹೈದರಾಬಾದಿಗೆ ಇದಕ್ಕೆ ಮುಂಚೆ ಮೂರು ಸಲ ಹೋಗಿದ್ದೆ. ಒಮ್ಮೆ ನನ್ನ ಹಿಂದಿನ ಕೆಲಸದಿಂದ ೧೨-೧೩ ವರ್ಷಗಳ ಹಿಂದೆ ೨-೩ ದಿನಗಳ ಮಟ್ಟಿಗೆ ಹೈದರಾಬಾದಿನಲ್ಲಿ ಉಳಿದಿದ್ದೆ. ಮತ್ತೊಮ್ಮೆ ಗೆಳೆಯರೊಂದಿಗೆ ರಾಮೋಜಿ ಸಿಟಿ ನೋಡಲು ಹೋಗಿದ್ದೆ. ಇನ್ನೊಮ್ಮೆ ಕುಟುಂಬದವರೊಂದಿಗೆ ಪ್ರವಾಸಕ್ಕೆ ಹೋಗಿದ್ದೆ. ನನ್ನ ಗೆಳೆಯ ಹೈದರಾಬಾದಿನ ಅವನ ಸಂಸ್ಥೆಯಲ್ಲಿ ಕೆಲಸ ಲಭ್ಯವಿದ್ದು ಆಸಕ್ತಿ ಇದ್ದರೆ ಹೈದರಾಬಾದಿಗೆ ಬರಬೇಕೆಂದು ತಿಳಿಸಿದ್ದ. ಬೆಂಗಳೂರಿನಲ್ಲಿ ಇದ್ದ ಸಂಸ್ಥೆಯಲ್ಲಿ ೧೧ ವರ್ಷ ಸೇವೆ ಮಾಡಿ ಇಲ್ಲಿನ ರಾಜಕೀಯದಿಂದ ಬೇಸತ್ತಿದ್ದ ನನಗೆ ಒಂದು ಹೊಸತೊಂದು ಬೇಕಾಗಿತ್ತು. ಆಯಿತು ಎಂದು ಒಪ್ಪಿಕೊಂಡು ಹೈದರಾಬಾದಿನ ಅವನ ಸಂಸ್ಥೆಗೆ ಅರ್ಜಿ ಸಲ್ಲಿಸಿ, ಆಯ್ಕೆಯೂ ಆದೆ. ಸರಿ, ಹೈದರಾಬಾದಿಗೆ ರೈಲಿನಲ್ಲಿ ಹೊರಟೆ. ನನ್ನ ಹೈದರಾಬಾದಿನ ಗೆಳೆಯ ಮುಂಜಾನೆ ೫ ರಿಂದ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ. ರೈಲು ಒಂದೆರಡು ಘಂಟೆ ತಡವಾಗಿ ತಲುಪಿ, ನಾನು ಇಲ್ಲಿನ ಲೋಕಲ್ ಟ್ರೈನ್ ಹತ್ತಿ ಹೈಟೆಕ್ ಸಿಟಿ ತಲುಪಿದೆ. ಹೈಟೆಕ್ ಸಿಟಿ ನಮ್ಮ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಯಂತೆ ನಗರದ ಹೊರವಲಯದಲ್ಲಿರುವ ಒಂದು ಸ್ಥಳ. ಅಲ್ಲಿಂದ ಸಂಸ್ಥೆಯವರೇ ಗೊತ್ತು ಮಾಡಿದ್ದ ವಿಶ್ರಾಂತಿ ಗೃಹಕ್ಕೆ ಹೋದೆ. ಒಂದು ಕಳಪೆ ವಿಶ್ರಾಂತಿ ಗೃಹವನ್ನು ಕಂಡು ನನಗೆ ಬೇಸರವಾಯತು. ಇಲ್ಲಿ ಬಂದು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯಿತು ನನ್ನ ಪರಿಸ್ಥಿತಿ. ಇದನ್ನು ಮುಂದಿನ ಪೋಸ್ಟುಗಳಲ್ಲಿ ತಿಳಿಸುತ್ತೇನೆ.

0 comments: