Saturday, February 12, 2011

12 Feb.
Posted by ಬಡಗಿ | 0 comments

ಸೌರ ದೀಪ - ೨


ನಾನು ಸೌರ ದೀಪದ ಹುಚ್ಚು ತಲೆಗೆ ಹಚ್ಚಿಸಿಕೊಂಡು ಡಿಲೈಟ್ ಕಂಪನಿಯ "ನೋವ" ದೀಪ ಖರೀದಿಸಿದ ನಂತರ ಬಿಡುಗಡೆಯಾದ ಸೌರ ದೀಪ ಇದು. ಅದೇ ಹುಚ್ಚಿನಲ್ಲಿ ಕೊಂಡುಕೊಂಡೆ. ಇದು ಪ್ರಪಂಚದಲ್ಲೇ ಅತ್ಯಂತ ಕಡಿಮೆ ಬೆಲೆಯ ಸೌರದೀಪ. ೫೫೦ ರೂಪಾಯಿಗೆ ಕೊಂಡುಕೊಂಡ ಈ ದೀಪವು ಬಹಳ ಒಳ್ಳೆಯ ಸೇವೆಯನ್ನು ನೀಡುತ್ತಿದೆ. ಈ ದೀಪದಲ್ಲಿ ನನಗೆ ಹೆಚ್ಚು ಖುಷಿ ಕೊಟ್ಟ ವಿಚಾರವೆಂದರೆ ಅದರ ವಿನ್ಯಾಸ. ನೀರಿನ ಬಾಟಲಿಯಾಕಾರದಲ್ಲಿರುವ ಇದು ಸೌರ ತಟ್ಟೆಯನ್ನೂ ಒಳಗೊಂಡಿದೆ. ಚಿಮಣಿ ದೀಪದ ಪರ್ಯಾಯವಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ. ಇದನ್ನು ನೋಕಿಯ ಚಾರ್ಜರ್‌ನಿಂದ ಕೂಡ ಚಾರ್ಜ್ ಮಾಡಿಕೊಳ್ಳಬಹುದು. ಇದಕ್ಕೆ ಹಲವಾರು ಪ್ರಶಸ್ತಿಗಳು ಸಹ ಬಂದಿದೆ.

ಇದೇ ಹುಚ್ಚಿನಲ್ಲಿ ಮತ್ತೊಂದು ದೀಪ ಕೊಂಡುಕೊಂಡಿರುವೆ. ಅದನ್ನು ಮುಂದಿನ ಲೇಖನದಲ್ಲಿ ಕಾಣುವಿರಿ...

0 comments: