Wednesday, May 20, 2009

20 May.
Posted by ಬಡಗಿ | 0 comments

ಸೌರ ದೀಪ


ಹಿಂದಿನ ಬಾರಿ ಸೌರ ದೀಪದ ಬಗ್ಗೆ ಬರೆದಿದ್ದೆ. ಇತ್ತೀಚೆಗೆ ಸೌರ ದೀಪ ಕೊಳ್ಳುವ ಅಭೀಪ್ಸೆ ಹೆಚ್ಚಾಗಿ ಅದರ ಬಗ್ಗೆ ಹೆಚ್ಚಿನ ಹುಡುಕಾಟಕ್ಕೆ ಕಾರಣವಾಯಿತು. ಅಂತರ್ಜಾಲವನ್ನೆಲ್ಲ ಜಾಲಾಡಿ ಕೊನೆಗೆ ಡಿಲೈಟ್ ಕಂಪನಿಯ ನೋವಾ ದೀಪ ಕೊಂಡಾಯಿತು. ಅದನ್ನು ಕೊಳ್ಳಲು ಇದ್ದ ಕಾರಣಗಳು - ೧. ದೀಪ ಎಲ್.ಇ.ಡಿ (ಲೈಟ್ ಎಮಿಟಿಂಗ್ ಡಯೋಡ್) - ಇದು ಸಾಮಾನ್ಯ ಸಿ.ಎಫ್.ಎಲ್ ಗಿಂತ ಹಚ್ಚು ಬಾಳಿಕೆ ಬರುತ್ತದೆ. ದಿನ ಕಳೆದಂತೆ ಎಲ್.ಇ.ಡಿ ದೀಪಗಳು ಹೆಚ್ಚು ಹೆಚ್ಚು ಉಪಯೋಗಿಸಲ್ಪಡುತ್ತದೆ ೨. ತಗಲುವ ಖರ್ಚು - ಅತಿ ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಸೌರ ದೀಪ ಎಂದರೆ ಇದೆ. ೩. ದೀಪದ ಬೆಳಕು - ಮೂರು ನಾಲ್ಕು ಬೆಳಕಿನ ಪ್ರಕರಣತೆ. ಹೆಚ್ಚು ಬೆಳಕು ಬೇಕೆಂದಾಗ ಹೆಚ್ಚು ಕಡಿಮೆ ಬೇಕೆಂದಾಗ ಕಡಿಮೆ ಮಾಡಿಕೊಳ್ಳುವ ವ್ಯವಸ್ಥೆ. ೪. ಈ ದೀಪದ ಹಿಂದಿರುವ ಇತಿಹಾಸ.

ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಈ ದೀಪ. ಕೊಂಡ ಮೇಲೆ ಕಂಡುಕೊಂಡ ಇನ್ನೊಂದು ವಿಷಯ - ಈ ದೀಪವನ್ನು ವಿವಿಧ ಕೋನಗಳಲ್ಲಿ ಬಳಸಬಹುದೆಂದು. ಬಹಳ ಶ್ರದ್ಧೆಯಿಂದ, ಕಾಳಜಿಯಿಂದ ತಯಾರಿಸಲ್ಪಟ್ಟಿದೆ.

0 comments: