Friday, September 12, 2008

Posted by ಬಡಗಿ | 0 comments

ಜಲ-ಆಶಯ










ಎರಡು ಗುಡ್ಡದ ಮಧ್ಯೆ
ಪುಟ್ಟ ಸಾಗರದಂತೆ ನಿಂತ ನೀರು ನೋಡಲೆನಿತು ಚೆನ್ನ
ಈ ಜಲಬಂಧನ
ಕಾರ್ಯವನ್ನು ವರ್ಣಿಸಲು ಇರಬೇಕಿತ್ತು ರನ್ನ
ಈ ಅಂದವನ್ನು ಸೃಷ್ಟಿಸಲು
ನಡೆದವೆಷ್ಟು ಮರಗಳ ಮಾರಣ ಹೋಮ
ಎಷ್ಟು ಪಶು, ಪಕ್ಷಿ, ಜನರು
ಕಳೆದುಕೊಂಡರೋ ತಮ್ಮ ಪೂರ್ವಜರ ಗ್ರಾಮ
ತನ್ನ ಏಳಿಗೆಗಾಗಿ ಕಟ್ಟಿಕೊಂಡ
ಮನುಜ ಈ ಜಲಾಶಯಗಳನ್ನ
ತಮ್ಮ ತಮ್ಮೊಳಗೆ ಕಚ್ಚಾಡುತ್ತಿದ್ದಾನೆ
ಸ್ಥಾಪಿಸಲು ನೀರಿಗಾಗಿ ಹಕ್ಕನ್ನ
ತನ್ನ ಗುರಿ ಸಾಧಿಸಲು
ಏನು ಬೇಕಾದರು ಮಾಡುವನು
ಕೊನೆಗೆ ತಾನೂ ಬದುಕನು
ಇತರರನ್ನೂ ಬದುಕಲು ಬಿಡನು


ಚಿತ್ರ ಕೃಪೆ : fcms.its.utas.edu.au/files/dam-large.JPG

0 comments: