Tuesday, May 16, 2006

Posted by ಬಡಗಿ | 0 comments

ಎಲ್ಲರೊಳೊಂದಾಗದಿರು ಮಂಕುತಿಮ್ಮ


ಅಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಯನಗರ ೫ ನೇ ಬ್ಲಾಕಿನ ನಿಲ್ದಾಣದಲ್ಲಿ ಒಬ್ಬ ಕುರುಡಿ “ಮಾರ್ಕೆಟ್‌ಗೆ ಹೋಗುತ್ತಾ, ಮಾರ್ಕೆಟ್‌ಗೆ ಹೋಗುತ್ತ” ಎಂದು ನಿಂತ ಬಸ್ಸಿನೆಡೆ ಕೂಗಿ ಕೇಳುತ್ತಿದ್ದಳು. ಅದು ಮಾರ್ಕೆಟ್ ಬಸ್ಸೇ, ಆದರೂ ಯಾರೂ ಹೋಗುತ್ತೆ ಎನ್ನಲಿಲ್ಲ. ಚಾಲಕ, ನಿರ್ವಾಹಕರೂ ಆತುರದಲ್ಲಿದ್ದರು. ನಾನೂ ಸುಮ್ಮನಿದ್ದೆ, ಇಳಿದು ಆ ಕುರುಡಿಯನ್ನು ಬಸ್ಸಿಗೆ ಹತ್ತಿಸಬಹುದಿತ್ತು, ಆದರೆ ಬಸ್ಸಿನಲ್ಲಿ ಎಲ್ಲರಂತೆಯೇ ನಾನೂ ಮೂಕ ಪ್ರೇಕ್ಷಕನಾಗಿದ್ದೆ. ಆ ನಿಲ್ದಾಣದಿಂದ ಮಾರ್ಕೆಟ್ ಕಡೆಗೆ ಹೊರಡುವ ಬಸ್ಸುಗಳು ತೀರ ಕಡಿಮೆ. ಒಂದು ಬಸ್ಸು ತಪ್ಪಿದರೆ ಕಡಿಮೆಯೆಂದರೂ ಒಂದು ಘಂಟೆ ಕಾಯಬೇಕು, ಮುಂದಿನ ಬಸ್ಸಿಗಾಗಿ, ನಂತರವೂ ಇದೇ ಪಾಡಾದರೆ……. ಈಗನ್ನಿಸುತ್ತಿದೆ “ಎಲ್ಲರೊಳಗೊಂದಾಗದಿರು ಮಂಕುತಿಮ್ಮ” ಎಂದು.

0 comments: