ನಿಶ್ಚಯ ಕನ್ನಡ ಫಾಂಟ್
ಫಾಂಟ್ ತಯಾರಿಯ ಕತೆ: ಕರೋನ ಸಮಯದಲ್ಲಿ ಕನ್ನಡ ಫಾಂಟ್ ಮಾಡಬೇಕೆಂದು ಆಸೆ ಆಯಿತು. ಯೂಟ್ಯೂಬ್ ಹುಡುಕಿದಾಗ ಸಿಕ್ಕಿದ್ದು ಮೊಹಮದ್ ಅಬ್ದುಲ್ಲಾ ರವರ ವಿಡಿಯೋ. ಕೆಲವಶ್ಟು ಪ್ರಯೋಗ ಮಾಡಿ ಹಾಗೆ ನಿಲ್ಲಿಸಿದ್ದೆ. ಕೆಲ ದಿನಗಳ ನಂತರ ಸುದರ್‍ಶನ-ಶ್ರೀ ಹರ್‍ಷರ ವಿಡಿಯೋಗಳು ಬಂದವು. ಮತ್ತೆ ಚಿಗುರಿದ ಆಸೆ ಕೆಲವಶ್ಟು ಕೆಲಸಕ್ಕೆ ನಾಂದಿ ಆಯಿತು. ಕೊನೆ ಕೊನೆಗೆ ಫಾಂಟ್ ತಯಾರಿ ತುಂಬಾ ಸಮಯ ಹಾಗು ತಾಂತ್ರಿಕ ಅಡಚಣೆಗಳು ಕಂಡು ನಿಂತಿತು. ಬಹಳಶ್ಟು ಆನ್ ಲೈನ್ ಫೋರಂಗಳಲ್ಲಿ ಕೇಳಿ ತಿಳಿಕೊಂಡಾಯಿತು. ಒತ್ತಕ್ಷರಗಳು ಒಂದರ ಮೇಲೊಂದು ಕೂರಲು ಅದಕ್ಕೆ ಪರಿಹಾರ ಕಾಣದಾಯಿತು. ಒಂದೊಂದು ಫಾಂಟ್ ತಯಾರಕರೂ ಒಂದೊಂದು ವಿಧಾನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಂಡಿದ್ದರು. ಒತ್ತಕ್ಷರ ತೊಂದರೆಯಿಂದಾಗಿ ನಿಲ್ಲಿಸಬೇಕಾಯಿತು.
Read more...