Tuesday, September 25, 2007

Posted by ಬಡಗಿ | 0 comments

ಮಗಾ, ಮಚ್ಚ, ಕಿಚ್ಚ?

ನಮ್ಮ ಹುಡುಗರು ಮಗಾ, ಮಚ್ಚ ಅಂತೆಲ್ಲ ಕರೀತಿದ್ರು. ಆದ್ರೆ ಈ ಮಗಾ, ಮಚ್ಚ ಅಂದ್ರೆ ಏನು ಅಂತ ಯೋಚಿಸುತ್ತಿದ್ದೆ, ವಿಚಾರಿಸುತ್ತಿದ್ದೆ. ಸಮಂಜಸ ಉತ್ತರ ದೊರೆಯಲೇ ಇಲ್ಲ. ಇತ್ತೀಚೆಗೆ ನನಗೆ ಹೊಳೆದ ಮಟ್ಟಿಗೆ ಮಗ ಅಂದರೆ ಮಹಾತ್ಮ ಗಾಂಧಿ (ಮ.ಗ) ಎಂದು ಮಚ್ಚ ಎಂದರೆ ಮಚ್ಚು ಹಿಡಿದವನೆಂದು (ಮೂರು ಕಣ್ಣುವುಳ್ಳವನೇ ಮುಕ್ಕಣ್ಣ ನೆಂಬ ರೀತಿಯಲ್ಲಿ) ಅರ್ಥೈಸಬಲ್ಲೆ. ಹುಚ್ಚ ಚಿತ್ರ ನೋಡಿದವರಿಗೆ ಕಿಚ್ಚ ಅಂದ್ರೆ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸಂದರ್ಭ ತಿಳಿದಿರಬಹುದು. ಕಿಚ್ಚ ಅಂದ್ರೆ ಕಿಚ್ಚು, ಇತ್ಯಾದಿ ಉತ್ತರಗಳು ಬಂದು ಹೋಗುತ್ತವೆ. ಆದರೆ ಕಿಚ್ಚ ಅಂದರೆ ಕಿಶೋರ ಚಂದ್ರ (ಕಿ.ಚ) ಎಂದು ಇತ್ತೀಚೆಗಷ್ಟೇ ಹೊಳೆಯಿತು.

0 comments: